ಎಡ್ಜ್ ಬಾಸ್ಟನ್: ರವಿಚಂದ್ರನ್ ಅಶ್ವಿನ್ ಈ ಋತುವಿನಲ್ಲಿ ಟೀಂ ಇಂಡಿಯಾದಲ್ಲಿ ಅವಕಾಶ ಸಿಗದಿದ್ದಾಗಲೆಲ್ಲಾ ಕೌಂಟಿ ಕ್ರಿಕೆಟ್ ನಲ್ಲಿ ಆಡಿದ್ದಕ್ಕೆ ತಕ್ಕ ಫಲವನ್ನೇ ಪಡೆದಿದ್ದಾರೆ.ಇಂಗ್ಲೆಂಡ್ ವಿರುದ್ಧ ಪ್ರಥಮ ಟೆಸ್ಟ್ ನ ಮೊದಲ ದಿನ ವೇಗಿಗಳನ್ನೂ ಮೀರಿಸಿರುವ ರವಿಚಂದ್ರನ್ ಅಶ್ವಿನ್ ನಾಲ್ಕು ವಿಕೆಟ್ ಕಿತ್ತು ತಮ್ಮ ಅನುಭವವನ್ನು ಸಾಬೀತುಪಡಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಆರಂಭಿಕ ಅಲೆಸ್ಟರ್ ಕುಕ್ ರನ್ನು 13 ರನ್ ಗೆ ಔಟ್ ಮಾಡುವ ಮೂಲಕ 8 ನೇ ಬಾರಿ ಅವರ ಬಲಿ