ಲಂಡನ್: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋತರೂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಸಿಕ್ಕಿದ ಯಶಸ್ಸು ಎಲ್ಲರನ್ನೂ ದಂಗುಬಡಿಸಿದೆ. ಇದೀಗ ತಮ್ಮ ಯಶಸ್ಸಿನ ಗುಟ್ಟೇನೆಂದು ಅಶ್ವಿನ್ ಹೇಳಿಕೊಂಡಿದ್ದಾರೆ. ಕುಲದೀಪ್ ಯಾದವ್ ಬಂದ ನಂತರ ಅಶ್ವಿನ್ ಮೂಲೆಗುಂಪಾದರು ಎಂದೇ ಹೇಳಲಾಗುತ್ತಿತ್ತು. ಅದೇ ಸಂದರ್ಭದಲ್ಲಿ ಅಶ್ವಿನ್ ಇಂಗ್ಲೆಂಡ್ ಪಿಚ್ ನಲ್ಲಿ ವೇಗಿಗಳಿಗಿಂತಲೂ ಹೆಚ್ಚು ವಿಕೆಟ್ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಅಲೆಸ್ಟರ್ ಕುಕ್ ರನ್ನು