ಧರ್ಮಶಾಲಾ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಟೀಂ ಇಂಡಿಯಾಗೆ ಆಟಗಾರರ ಗಾಯ ಚಿಂತೆಯ ವಿಷಯವಾಗಿದೆ.ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕಾಲಿಗೆ ಗಾಯ ಮಾಡಿಕೊಂಡು ನಾಳೆ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ.ಇದರ ಬೆನ್ನಲ್ಲೇ ಮತ್ತೊಬ್ಬ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದ ಸುದ್ದಿ ಕೇಳಿಬರುತ್ತಿದೆ. ಜಡೇಜಾಗೆ ಮತ್ತೆ ಮೊಣಕಾಲಿನ ನೋವು ಮರುಕಳಿಸಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲೇ ಜಡೇಜಾ ಮೊಣಕಾಲಿಗೆ ಐಸ್ ಪ್ಯಾಕ್