ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಸದ್ಯಕ್ಕೆ ಗಾಯದ ಕಾರಣದಿಂದ ಕ್ರಿಕೆಟ್ ನಿಂದ ದೂರವಿದ್ದಾರೆ. ಬಿಡುವಿನ ವೇಳೆಯಲ್ಲಿ ಅವರು ಜಂಗಲ್ ಸಫಾರಿ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಬಿಡುವಿದ್ದಾಗ ಕಾಡಿನ ಕಡೆಗೆ ಪ್ರಯಾಣ ಬೆಳೆಸುವ ಹವ್ಯಾಸ ಬೆಳೆಸಿಕೊಂಡಿರುವ ರವೀಂದ್ರ ಜಡೇಜಾ ಮತ್ತೊಂದು ಜಂಗಲ್ ಸಫಾರಿ ಮಾಡುವ ವಿಡಿಯೋವೊಂದನ್ನು ಪ್ರಕಟಿಸಿದ್ದಾರೆ. ಈ ವಿಡಿಯೋದಲ್ಲಿ ಹುಲಿಯೊಂದು ಜಡೇಜಾ ದಾರಿಗಡ್ಡವಾಗಿ ಬರುತ್ತದೆ.ಇದನ್ನು ತೋರಿಸಿ ಜಡೇಜಾ ‘ನೋಡಿ ನಾನು ಬೇಗ ಗುಣಮುಖನಾಗಲೆಂದು