2ನೇ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ ಜೊತೆ ಅಜೇಯ 70 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದ ಆಲ್ರೌಂಡರ್ ರವೀಂದ್ರ ಜಡೇಜಾರನ್ನ 3ನೇ ಟೆಸ್ಟ್ ಪಂದ್ಯದಿಂದ ಅಮಾನತು ಮಾಡಲಾಗಿದೆ. ಐಸಿಸಿ ನಿಯಮ ಉಲ್ಲಂಘಿಸಿದ ಆರೋಪದಡಿ ಜಡೇಜಾಗೆ ಪಂದ್ಯದ ಶೇ.50ರಷ್ಟು ಸಂಭಾವನೆಯ ದಂಡ ಮತ್ತು 3ನೇ ಟೆಸ್ಟ್ ಪಂದ್ಯದಿಂದ ಅಮಾನತಿನ ಶಿಕ್ಷೆ ವಿಧಿಸಲಾಗಿದೆ.ತನ್ನದೇ ಬೌಲಿಂಗ್`ನಲ್ಲಿ ಬ್ಯಾಟ್ಸ್`ಮನ್ ಹೊಡೆದ ಬಾಲನ್ನ ಹಿಡಿದ ರವೀಂದ್ರ ಜಡೇಜಾ ರಭಸವಾಗಿ ಚೆಂಡನ್ನ ಬ್ಯಾಟ್ಸ್`ಮನ್ ದಿಮುತ್ ಕರುಣರತ್ನೆ ಕಡೆ