ರವಿಶಾಸ್ತ್ರಿ ಮತ್ತು ಬಳಗದ ಓಡಾಟಕ್ಕೆ ತಕ್ಕ ಬೆಲೆ ತೆತ್ತ ಟೀಂ ಇಂಡಿಯಾ

ಲಂಡನ್| Krishnaveni K| Last Modified ಶನಿವಾರ, 11 ಸೆಪ್ಟಂಬರ್ 2021 (08:55 IST)
ಲಂಡನ್: ಇಂಗ್ಲೆಂಡ್ ಪ್ರವಾಸದ ವೇಳೆಗೆ ಕ್ರಿಕೆಟಿಗರಿಗೆ ನಿರ್ಬಂಧ ಕೊಂಚ ಸಡಿಲಿಕೆಯಾಗಿತ್ತು. ಇದರ ಲಾಭ ಪಡೆದ ಕೋಚ್ ರವಿಶಾಸ್ತ್ರಿ ಮತ್ತು ಬಳಗ ಹೊರಗಡೆ ಓಡಾಡಿದ್ದಕ್ಕೆ ತಕ್ಕ ಬೆಲೆ ತೆರುವಂತಾಗಿದೆ.
 > ಕೊನೆಯ ಟೆಸ್ಟ್ ಪಂದ್ಯಗಳ ವೇಳೆ ಭಾರತೀಯ ಕ್ರಿಕೆಟಿಗರಿಗೆ ಹೊರಗೆ ಊಟ ಮಾಡಲು, ಓಡಾಡಲು ಅನುಮತಿ ನೀಡಲಾಗಿತ್ತು. ಇದರ ಲಾಭ ಪಡೆದ ರವಿಶಾಸ್ತ್ರಿ ಮತ್ತು ಬಳಗ ಪುಸ್ತಕ ಅನಾವರಣ ಕಾರ್ಯಕ್ರಮವೊಂದಕ್ಕೆ ತೆರಳಿತ್ತು.>   ಇದರಿಂದಾಗಿ ಕೊರೋನಾ ಸೋಂಕಿಗೊಳಗಾದ ಸಹಾಯ ಸಿಬ್ಬಂದಿಗಳಿಂದ ಐತಿಹಾಸಿಕವಾಗಿ ಕೊನೆಗೊಳ್ಳಬೇಕಾದ ಟೆಸ್ಟ್ ಸರಣಿ ಅನಿಶ್ಚಿತತೆಯಲ್ಲಿ ಕೊನೆಗೊಂಡಿದೆ. ಒಂದು ವೇಳೆ ಭಾರತ ಅಂತಿಮ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದರೂ ನ್ಯಾಯಸಮ್ಮತವಾಗಿ ಸರಣಿ ಗೆಲುವಿನ ಖುಷಿ ಅನುಭವಿಸಬಹುದಿತ್ತು. ಆದರೆ ಬೇಕಾಬಿಟ್ಟಿ ಓಡಾಟದಿಂದ ತಾವೇ ಅಪಾಯ ಮೈಮೇಲೆಳದುಕೊಂಡಿದ್ದು ವಿಪರ್ಯಾಸ.ಇದರಲ್ಲಿ ಇನ್ನಷ್ಟು ಓದಿ :