ಮುಂಬೈ|
Krishnaveni K|
Last Modified ಶುಕ್ರವಾರ, 22 ಜನವರಿ 2021 (07:41 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ 36 ರನ್ ಗೆ ಆಲೌಟ್ ಆಗಿ ಅವಮಾನಕ್ಕೀಡಾದ ಬಳಿಕ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಆಟಗಾರರ ಬಳಿ ಪ್ರತಿಜ್ಞೆ ಮಾಡಿಸಿದ್ದರಂತೆ.
ಇನ್ನೆಂದೂ ನಾವು 36 ರನ್ ಗೆ ಆಲೌಟ್ ಆಗಲ್ಲ ಎಂದು ರವಿಶಾಸ್ತ್ರಿ ಪ್ರತಿಜ್ಞೆ ಮಾಡಿಸಿದ್ದರು ಎಂದು ತವರಿಗೆ ಮರಳಿದ ವೇಗಿ ಮೊಹಮ್ಮದ್ ಸಿರಾಜ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ. 36 ರಷ್ಟು ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವುದು ಒಂದೇ ಬಾರಿ. ಮತ್ತೆ ಈ ರೀತಿ ಆಗಲ್ಲ ಎಂದು ನಮ್ಮಲ್ಲಿ ಭರವಸೆ ತುಂಬಿದರು ಎಂದು ಸಿರಾಜ್ ಹೇಳಿದ್ದಾರೆ.