ಬುಕ್ ಲಾಂಚ್ ಈವೆಂಟ್ ಗೆ ಹೋಗಿದ್ದನ್ನು ಸಮರ್ಥಿಸಿಕೊಂಡ ರವಿಶಾಸ್ತ್ರಿ

ಲಂಡನ್| Krishnaveni K| Last Modified ಭಾನುವಾರ, 12 ಸೆಪ್ಟಂಬರ್ 2021 (14:23 IST)
ಲಂಡನ್: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ರದ್ದಾಗಲು ಕಾರಣವಾಗಿದ್ದು ಕೋಚ್ ರವಿಶಾಸ್ತ್ರಿ ಸೇರಿದಂತೆ ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು. ತಂಡದಲ್ಲಿ ಮೊದಲು ಕೊರೋನಾ ಹರಡಲು ಕಾರಣವಾಗಿದ್ದು ಕೋಚ್ ರವಿಶಾಸ್ತ್ರಿ.

 
ಇಂಗ್ಲೆಂಡ್ ನಲ್ಲಿ ಬುಕ್ ಲಾಂಚ್ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ರವಿಶಾಸ್ತ್ರಿಯಿಂದ ಎಡವಟ್ಟಾಗಿತ್ತು. ಹಾಗಿದ್ದರೂ ರವಿಶಾಸ್ತ್ರಿ ಈಗ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
 
ಇಂಗ್ಲೆಂಡ್ ನಲ್ಲಿ ಇಡೀ ದೇಶವೇ ಮುಕ್ತವಾಗಿದೆ. ಅಲ್ಲಿ ಯಾವುದೇ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿಲ್ಲ. ಮೊದಲ ಟೆಸ್ಟ್ ಪಂದ್ಯದಿಂದಲೂ ಏನು ಬೇಕಾದರೂ ಆಗಬಹುದಿತ್ತು’ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲಿ ರವಿಶಾಸ್ತ್ರಿ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :