ಬೆಂಗಳೂರು: ಐಪಿಎಲ್ 2023 ರಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶಾಕ್ ಎದುರಾಗಿದೆ.ಆರ್ ಸಿಬಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿಗೆ ಕಳೆದ ಪಂದ್ಯದಲ್ಲಿ ನಿಧಾನಗತಿಯ ಓವರ್ ಎಸೆದಿದ್ದಕ್ಕೆ 24 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದಕ್ಕೆ ಮೊದಲು ಫಾ ಡು ಪ್ಲೆಸಿಸ್ ಮೊದಲ ಬಾರಿ ಈ ತಪ್ಪೆಸಗಿ 12 ಲಕ್ಷ ದಂಡ ತೆತ್ತಿದ್ದರು.ಮೂರನೇ ಬಾರಿ ಇದೇ ತಪ್ಪು ಮಾಡಿದರೆ ಆ ತಂಡದ ನಾಯಕನನ್ನು ನಿಷೇಧಿಸಬಹುದಾಗಿದೆ.