ಇಂಧೋರ್: ಐಪಿಎಲ್ ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಕನ್ನಡಿಗರೇ ತುಂಬಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸವಾಲೊಡ್ಡಲಿದೆ.ಕೆಎಲ್ ರಾಹುಲ್, ಕರುಣ್ ನಾಯರ್ ನಂತಹ ಕನ್ನಡಿಗ ಆಟಗಾರರೇ ಆಧಾರ ಸ್ತಂಬವಾಗಿರುವ ಪಂಜಾಬ್ ತಂಡಕ್ಕೆ ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ನಿರ್ಣಾಯಕ ಪಂದ್ಯವಾಡಲಿದೆ.ಈ ಪಂದ್ಯ ಗೆದ್ದರಷ್ಟೇ ಕೊಹ್ಲಿ ಪಡೆಯ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ. ಅತ್ತ ಪಂಜಾಬ್ ಗೂ ಇದೇ ಸ್ಥಿತಿ. ಕಳೆದೆರಡು ಪಂದ್ಯಗಳನ್ನು ಸೋತಿರುವ ರವಿಚಂದ್ರನ್ ಅಶ್ವಿನ್