ಮುಂಬೈ: ಟೀಂ ಇಂಡಿಯಾ ಟಿ20 ನಾಯಕತ್ವ ಬಿಡದಂತೆ ವಿರಾಟ್ ಕೊಹ್ಲಿಗೆ ಮನವಿ ಮಾಡಿದ್ದೆವು ಎಂದು ಈ ಮೊದಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ ಮಾತನ್ನೇ ಈಗ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಪುನರುಚ್ಚರಿಸಿದ್ದಾರೆ.