2014ರ ಸೋಚಿ ಚಳಿಗಾಲದ ಕ್ರೀಡಾಕೂಟ ಮತ್ತಿತರ ಕ್ರೀಡಾಕೂಟಗಳಲ್ಲಿ ಸರ್ಕಾರಿ ಪ್ರಾಯೋಜಿತ ಉದ್ದೀಪನ ಮದ್ದು ಸೇವನೆ ವ್ಯಾಪಕವಾಗಿ ನಡೆದಿರುವುದು ತನಿಖೆಯಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ 2016ರ ರಿಯೊ ಒಲಿಂಪಿಕ್ಸ್ಗೆ ರಷ್ಯಾದ ಸ್ಥಾನಮಾನ ಕುರಿತು ನಿರ್ಧರಿಸಲು ಐಒಸಿ ಸದಸ್ಯರು ತುರ್ತು ಸಭೆಯನ್ನು ಕರೆದಿದ್ದಾರೆ. ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆಯು(ವಾಡಾ) ರಷ್ಯಾದ ಸ್ಪರ್ಧಿಗಳನ್ನು ಮತ್ತು ಅಧಿಕಾರಿಗಳನ್ನು ಮುಂದಿನ ತಿಂಗಳ ರಿಯೊ ಕ್ರೀಡಾಕೂಟದಿಂದ ನಿಷೇಧಿಸಬೇಕೆಂದು ಕರೆ ನೀಡಿದೆ. ಕೆನಡಾದ ಕಾನೂನು ಪ್ರಾಧ್ಯಾಪಕ ಮೆಕ್ಲಾರೆನ್ ನಡೆಸಿದ ತನಿಖೆಯಲ್ಲಿ