Photo Courtesy: Instagram ನವದೆಹಲಿ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ರಸ್ತೆ ಅಪಘಾತದಲ್ಲಿ ಗಾಯಗೊಂಡು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಅವರೀಗ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಜನ್ಮದಿನಾಂಕವನ್ನು ಬದಲಾಯಿಸಿ ಸುದ್ದಿಯಾಗಿದ್ದಾರೆ. ಕಳೆದ ವರ್ಷ ಕೊನೆಯಲ್ಲಿ ರಿಷಬ್ ಕಾರು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದಿದ್ದಲ್ಲೆ, ಬೆಂಕಿ ಹತ್ತಿಕೊಂಡು ಸಂಪೂರ್ಣ ಭಸ್ಮವಾಗಿತ್ತು. ಸ್ಥಳೀಯ ಬಸ್ ನಿರ್ವಾಹಕರ ಸಹಾಯದಿಂದ ರಿಷಬ್ ಪವಾಡ ಸದೃಶವಾಗಿ ಬದುಕಿ ಆಸ್ಪತ್ರೆ ಸೇರಿದ್ದರು.