ಭಾರತ-ದ.ಆಫ್ರಿಕಾ ಟೆಸ್ಟ್: ಮಿಂಚಿದ ರಿಷಬ್ ಪಂತ್, ಕೊಹ್ಲಿಗೆ ಸಾಥ್

Photo Courtesy: Google
ಕೇಪ್ ಟೌನ್| Krishnaveni K| Last Modified ಗುರುವಾರ, 13 ಜನವರಿ 2022 (16:26 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿದೆ.

ಇದರೊಂದಿಗೆ ಟೀಂ ಇಂಡಿಯಾ 143 ರನ್ ಗಳ ಮುನ್ನಡೆ ಸಾಧಿಸಿದೆ. ಇಷ್ಟು ದಿನ ಕಳಪೆ ಆಟದಿಂದಾಗಿ ಟೀಕೆಗೊಳಗಾಗಿದ್ದ ರಿಷಬ್ ಪಂತ್ ಇಂದು ಉತ್ತಮ ಬ್ಯಾಟಿಂಗ್ ನಡೆಸಿ ಮಿಂಚಿದರು. ನಿನ್ನೆ ಅಜೇಯರಾಗುಳಿದಿದ್ದ ಪೂಜಾರ 9 ರನ್ ಗೆ ಔಟಾದ ಬಳಿಕ ನಾಯಕ ಕೊಹ್ಲಿಯನ್ನು ಕೂಡಿಕೊಂಡ ರಿಷಬ್ 51 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ನಾಯಕ ಕೊಹ್ಲಿ 28 ರನ್ ಗಳಿಸಿ ನಿಧಾನಗತಿಯಲ್ಲಿ ಇನಿಂಗ್ಸ್ ಕಟ್ಟುವ ಕೆಲಸ ಮಾಡುತ್ತಿದ್ದಾರೆ.


ಹಾಗಿದ್ದರೂ ಭಾರತ ಈಗ ಇವರಿಬ್ಬರ ಜೊತೆಯಾಟದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಇವರು ಎಷ್ಟು ಹೊತ್ತು ಕ್ರೀಸ್ ನಲ್ಲಿರುತ್ತಾರೋ, ಅಷ್ಟು ಟೀಂ ಇಂಡಿಯಾ ಸುರಕ್ಷಿತವಾಗಿರಲಿದೆ.


ಇದರಲ್ಲಿ ಇನ್ನಷ್ಟು ಓದಿ :