ಬೆಂಗಳೂರು: ರಸ್ತೆ ಅಪಘಾತದಿಂದಾಗಿ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಗೆ ಸದ್ಯಕ್ಕೆ ಕೀಪಿಂಗ್ ಮಾಡಲು ಕಷ್ಟವೆನ್ನಲಾಗಿದೆ.ರಿಷಬ್ ಲಘು ಪ್ರಮಾಣದಲ್ಲಿ ವ್ಯಾಯಾಮದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಅವರು ನೋವು ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಅವರು ತಮ್ಮ ಪ್ರಯತ್ನ ಬಿಟ್ಟಿಲ್ಲ.ಮೂಲಗಳ ಪ್ರಕಾರ ರಿಷಬ್ ಕೆಲವು ದಿನಗಳಲ್ಲಿ ಚೇತರಿಸಿಕೊಂಡು ತಂಡಕ್ಕೆ ಕಮ್ ಬ್ಯಾಕ್ ಮಾಡಿದರೂ ಕೀಪಿಂಗ್ ಮಾಡುವುದು ಕಷ್ಟ. ಕೇವಲ ಬ್ಯಾಟಿಗನಾಗಿ ಅಷ್ಟೇ