ರಿವ್ಯೂ ತಗೊಳ್ಳಿ ಪ್ಲೀಸ್! ಕ್ಯಾಪ್ಟನ್ ರೆಹಾನೆ ಕಾಲು ಹಿಡಿಯಲು ಮುಂದಾದ ರಿಷಬ್ ಪಂತ್

ಬ್ರಿಸ್ಬೇನ್| Krishnaveni K| Last Modified ಶನಿವಾರ, 16 ಜನವರಿ 2021 (09:01 IST)
ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ನಾಯಕ ಅಜಿಂಕ್ಯಾ ರೆಹಾನೆ ಬಳಿ ರಿವ್ಯೂ ಪಡೆಯಲು ಮನವಿ ಮಾಡುತ್ತಿರುವ ತಮಾಷೆಯ ವಿಡಿಯೋವೊಂದು ಈಗ ವೈರಲ್ ಆಗಿದೆ.

 
ಟಿ ನಟರಾಜನ್ ಎಸೆತವನ್ನು ಆಸೀಸ್ ಬ್ಯಾಟ್ಸ್ ಮನ್ ಕ್ಯಾಮರೂನ್ ಗ್ರೀನ್ ಹೊಡೆಯಲು ವಿಫಲವಾದಾಗ ರಿಷಬ್‍ ಅದನ್ನು ಕ್ಯಾಚ್ ಪಡೆದಿದ್ದರು. ಕ್ಯಾಚ್ ಪಡೆದ ಬಳಿಕ ರಿಷಬ್ ನೇರವಾಗಿ ಅಂಪಾಯರ್ ಗೆ ಔಟ್ ಗೆ ಮನವಿ ಮಾಡಿದರು. ಆದರೆ ಅವರು ಪುರಸ್ಕರಿಸದೇ ಇದ್ದಾಗ ನಾಯಕ ಅಜಿಂಕ್ಯಾ ರೆಹಾನೆ ಬಳಿ ತೆರಳಿ ಮಕ್ಕಳಂತೆ ಪ್ಲೀಸ್ ರಿವ್ಯೂ ತಗೊಳ್ಳಿ ಎಂದು ಕಾಡಿ ಬೇಡಿ ಮನವಿ ಮಾಡಿದ್ದಾರೆ. ಇದಕ್ಕೆ ಪಕ್ಕದಲ್ಲಿದ್ದ ಫೀಲ್ಡರ್ ಗಳೆಲ್ಲಾ ನಕ್ಕು ಸುಮ್ಮನಾಗಿದ್ದಾರೆ. ಆದರೆ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :