ರಾಹುಲ್ ದ್ರಾವಿಡ್ ಬರ್ತ್ ಡೇ ಸೆಲೆಬ್ರೇಷನ್: ಟ್ರೋಲ್ ಆಗಿದ್ದ ಪಂತ್, ಪೂಜಾರ

ಕೇಪ್ ಟೌನ್| Krishnaveni K| Last Modified ಗುರುವಾರ, 13 ಜನವರಿ 2022 (09:20 IST)
ಕೇಪ್ ಟೌನ್: ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬರ್ತ್ ಡೇ ನಿಮಿತ್ತ ಟೀಂ ಇಂಡಿಯಾ ಮೊನ್ನೆ ದಿನದಂತ್ಯದ ಬಳಿಕ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿತ್ತು. ಆದರೆ ಬರ್ತ್ ಡೇ ದ್ರಾವಿಡ್ ರದ್ದಾದರೂ ನೆಟ್ಟಿಗರ ಗಮನ ಸೆಳೆದಿದ್ದು ರಿಷಬ್ ಪಂತ್, ಚೇತೇಶ್ವರ ಪೂಜಾರ.

ದ್ರಾವಿಡ್ ಗಂಭೀರ ಸ್ವಭಾವದ ವ್ಯಕ್ತಿ. ಅವರ ಬರ್ತ್ ಡೇ ಪಾರ್ಟಿಯಲ್ಲಿ ಕೇಕ್ ಕಟಿಂಗ್ ಮಾಡುವಾಗ ಕಳಪೆ ಹೊಡೆತಕ್ಕೆ ಔಟಾಗಿದ್ದ ರಿಷಬ್ ಪಂತ್ ಕೊಂಚ ದೂರವೇ ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಇದನ್ನು ನೋಡಿ ನೆಟ್ಟಿಗರು ಬಹುಶಃ ರಿಷಬ್ ಗೆ ದ್ರಾವಿಡ್ ಬೈತಾರೆ ಎಂದು ಭಯವಾಗಿರಬೇಕು. ಅದಕ್ಕೆ ಕೇಕ್ ನೋಡಿಯೂ ತಡೆದುಕೊಂಡು ಸುಮ್ಮನಾಗಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.


ಇನ್ನೊಂದು ಫೋಟೋದಲ್ಲಿ ಪೂಜಾರ ಕೈ ತಡೆದು ರಿಷಬ್ ಕೇಕ್ ಗೆ ಕೈ ಹಾಕುತ್ತಾರೆ. ಈ ವೇಳೆ ಅಲ್ಲಿ ದ್ರಾವಿಡ್ ಇರುವುದಿಲ್ಲ. ಹೀಗಾಗಿ ಪೂಜಾರಗೆ ಕೊಂಚ ಧೈರ್ಯ ಬಂದಿದೆ, ಆದರೆ ಪಂತ್ ನಾನು ಮೊದಲು ಬಂದಿದ್ದೇನೆ ಎಂದು ಕೇಕ್ ಸವವಿಯಲು ಪೈಪೋಟಿಗೆ ಬಿದ್ದಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಇನ್ನು, ಸಾಮಾನ್ಯವಾಗಿ ಎಲ್ಲರಿಗೂ ಮಾಡುವಂತೆ ದ್ರಾವಿಡ್ ಮುಖಕ್ಕೆ ಯಾರೂ ಕೇಕ್ ಬಳಿದಿಲ್ಲ. ಹೀಗಾಗಿ ದ್ರಾವಿಡ್ ಎಂದರೆ ಎಲ್ಲರಿಗೂ ಭಯವಿದೆ ಎಂದು ತಮಾಷೆ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :