ಅಡಿಲೇಡ್: ಈ ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯಲ್ಲಿ ಸ್ಲೆಡ್ಜಿಂಗ್ ಮಾಡದೇ ಇರಲು ಆಸ್ಟ್ರೇಲಿಯಾ ತೀರ್ಮಾನಿಸಿದ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ನಾವೂ ಶಾಂತಿಯುತ ಕ್ರಿಕೆಟ್ ಆಡುತ್ತೇವೆ ಎಂದಿದ್ದರು.ಆದರೆ ನಾಯಕನ ಮಾತನ್ನು ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಮೀರಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ದಿನ ರಿಷಬ್ ಪಂತ್ ವಿಕೆಟ್ ಕೀಪಿಂಗ್ ಮಾಡುತ್ತಲೇ ಜಿಗುಟು ಆಟ ಆಡುತ್ತಿದ್ದ ಆಸ್ಟ್ರೇಲಿಯಾ ಉಸ್ಮಾನ್ ಖವಾಜರನ್ನು ಕಿಚಾಯಿಸಿದ್ದು ಮೈಕ್ರೋಫೋನ್