ಲಂಡನ್: ಮನೆಯಲ್ಲಿ ಹುಲಿ ಹೊರಗೆ ಇಲಿ ಎಂಬ ಮಾತಿದೆ. ಆದರೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಇದನ್ನು ಉಲ್ಟಾ ಮಾಡಿದ್ದಾರೆ.ರಿಷಬ್ ಪಂತ್ ಸ್ವದೇಶದಲ್ಲಿ ನಡೆಯುವ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ ಮಿಂಚಿದ್ದು ಕಡಿಮೆ. ಆದರೆ ವಿದೇಶೀ ಪಿಚ್ ನಲ್ಲಿ ಭರ್ಜರಿ ಇನಿಂಗ್ಸ್ ಆಡುತ್ತಾರೆ.ಇದಕ್ಕೆ ಈ ಮೊದಲು ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಸರಣಿ ಕೂಡಾ ಉದಾಹರಣೆ. ಸೋಲುತ್ತಿದ್ದ ಟೀಂ ಇಂಡಿಯಾಗೆ ಕಳೆದ ಬಾರಿ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗಿದ್ದು,