ಗುರು ಧೋನಿ ಮನೆಗೆ ಭೇಟಿ ಕೊಟ್ಟ ಭವಿಷ್ಯದ ವಿಕೆಟ್ ಕೀಪರ್ ರಿಷಬ್ ಪಂತ್

ರಾಂಚಿ| Krishnaveni K| Last Modified ಶನಿವಾರ, 26 ಅಕ್ಟೋಬರ್ 2019 (09:25 IST)
ರಾಂಚಿ: ಧೋನಿ ಎಂದರೆ ತಮ್ಮ ಗುರು ಇದ್ದಂತೆ ಎಂದು ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಗಾಗ ಹೇಳುತ್ತಲೇ ಇರುತ್ತಾರೆ. ಇದೀಗ ಅದೇ ಗುರುವಿನ ಮನೆಗೆ ರಿಷಬ್ ಭೇಟಿ ನೀಡಿದ್ದಾರೆ.

 
ಸದ್ಯಕ್ಕೆ ಧೋನಿ ಕ್ರಿಕೆಟ್ ನಿಂದ ಬಿಡುವು ಪಡೆದಿದ್ದರೆ ರಿಷಬ್ ಪಂತ್ ಫಾರ್ಮ್ ಸಮಸ್ಯೆಯಿಂದಾಗಿ ಟೆಸ್ಟ್ ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ರಿಷಬ್ ಅವಕಾಶ ಪಡೆದಿದ್ದು, ಮತ್ತೊಬ್ಬ ಯುವ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಜತೆಗೆ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಿದೆ.
 
ಈ ನಡುವೆ ಧೋನಿ ಮನೆಗೆ ರಿಷಬ್ ಭೇಟಿ ನೀಡಿರುವುದು ಮಹತ್ವ ಪಡೆದಿದೆ. ಧೋನಿ ಜತೆಗೆ ಕೆಲವು ಖಾಸಗಿ ಕ್ಷಣಗಳನ್ನು ಕಳೆದಿರುವ ರಿಷಬ್ ತನ್ನ ಗುರುವಿನ ಸಲಹೆ ಸೂಚನೆ ಪಡೆದಿದ್ದಾರೆ. ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸಕಾರಾತ್ಮಕ ಭಾವನೆ ಪಡೆದೆ ಎಂದು ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :