Widgets Magazine

ರಸ್ತೆ ಸುರಕ್ಷತೆಗಾಗಿ ಕ್ರಿಕೆಟ್: ಭಾರತ ತಂಡದಲ್ಲಿ ಸಚಿನ್, ಸೆಹ್ವಾಗ್

ಮುಂಬೈ| Krishnaveni K| Last Modified ಬುಧವಾರ, 19 ಫೆಬ್ರವರಿ 2020 (09:55 IST)
ಮುಂಬೈ: ರಸ್ತೆ ಸುರಕ್ಷತೆಗಾಗಿ ಜಾಗೃತಿ ಮೂಡಿಸಲು ನಡೆಯಲಿರುವ ಟಿ20 ಟೂರ್ನಮೆಂಟ್ ನಲ್ಲಿ ಹಳೆಯ ಕ್ರಿಕೆಟ್ ದಿಗ್ಗಜರು ಮತ್ತೆ ಕ್ರಿಕೆಟ್ ಕಣಕ್ಕೆ ಇಳಿಯಲಿದ್ದಾರೆ.
 

ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ನಲ್ಲಿ ಭಾರತ ಮಾತ್ರವಲ್ಲದೆ, ಆಸ್ಟ್ರೇಲಿಯಾ, ಶ್ರೀಲಂಕಾ, ದ.ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡವೂ ಪಾಲ್ಗೊಳ್ಳುತ್ತಿದೆ. ಎಲ್ಲಾ ತಂಡಗಳಲ್ಲಿ ಆಯಾ ದೇಶಗಳ ದಿಗ್ಗಜ ಮಾಜಿ ಕ್ರಿಕೆಟಿಗರು ಆಡಲಿದ್ದಾರೆ.
 
ಮಾರ್ಚ್ 5 ರಿಂದ ಆರಂಭವಾಗುವ ಸರಣಿಗೆ ಇಂಡಿಯನ್ ಲೆಜೆಂಡ್ಸ್ ತಂಡದ ಘೋಷಣೆಯಾಗಿದ್ದು, ಭಾರತ ತಂಡದಲ್ಲಿ ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್, ಮುನಾಫ್ ಪಟೇಲ್, ಅಜಿತ್ ಅಗರ್ಕರ್ ಮುಂತಾದವರು ಆಡಲಿದ್ದಾರೆ.
 
ಇಂಡಿಯನ್ ಲೆಜೆಂಡ್ಸ್ ತಂಡಕ್ಕೆ ಸಚಿನ್ ನಾಯಕರಾಗಿರುತ್ತಾರೆ. ಇತ್ತೀಚೆಗಷ್ಟೇ ಬುಶ್ ಫೈರ್ ಕ್ರಿಕೆಟ್ ಲೀಗ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡಿದ್ದ ಸಚಿನ್ ತಮ್ಮಲ್ಲಿ ಇನ್ನೂ ಹಳೆಯ ಫಾರ್ಮ್ ಉಳಿದಿದೆ ಎಂದು ತೋರಿಸಿಕೊಟ್ಟಿದ್ದರು. ಸಚಿನ್ ಆಡಿದ ಆ ಪಂದ್ಯ ಭಾರೀ ಜನಪ್ರಿಯವಾಗಿತ್ತು. ಹೀಗಾಗಿ ಈ ಟೂರ್ನಮೆಂಟ್ ಕೂಡಾ ಯಶಸ್ವಿಯಾಗಿ ನಡೆಯಲಿದೆ ಎಂಬ ವಿಶ್ವಾಸ ಸಂಘಟಕರದ್ದು.
ಇದರಲ್ಲಿ ಇನ್ನಷ್ಟು ಓದಿ :