ಮುಂಬೈ: ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಮುತ್ತಯ್ಯ ಮುರಳೀಧರನ್ ಇವರೆಲ್ಲಾ ಕ್ರಿಕೆಟ್ ಆಡುವುದನ್ನು ಇನ್ನು ಮುಂದೆ ಲೈವ್ ಆಗಿ ನೋಡುವ ಅವಕಾಶವೇ ಸಿಗದು ಎನ್ನುವವರಿಗೊಂದು ಸುವರ್ಣಾವಕಾಶ ಸಿಕ್ಕಿದೆ.ಈ ದಿಗ್ಗಜ ಕ್ರಿಕೆಟಿಗರು ಇದೀಗ ರಸ್ತೆ ಸುರಕ್ಷತೆಗಾಗಿ ಟಿ20 ವಿಶ್ವ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿದ್ದು, ತಮ್ಮ ರಾಷ್ಟ್ರವನ್ನು ಪ್ರತಿನಿಧಿಸಲಿದ್ದಾರೆ. ಒಟ್ಟು ಐದು ರಾಷ್ಟ್ರಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ದ.ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.ಸಚಿನ್