ಕೊಲೊಂಬೊ: ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಹಲವು ದಾಖಲೆಗಳನ್ನು ಮುರಿದಿದ್ದಾರೆ.ಇದೀಗ ಏಷ್ಯಾ ಕಪ್ ನಲ್ಲಿ ಆಡಲಿರುವ ಕಿಂಗ್ ಕೊಹ್ಲಿ ಮತ್ತಷ್ಟು ದಾಖಲೆಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ರೆಡಿಯಾಗಿದ್ದಾರೆ. ಕೇವಲ ಕೊಹ್ಲಿ ಮಾತ್ರವಲ್ಲ ನಾಯಕ ರೋಹಿತ್ ಶರ್ಮಾ ಕೂಡಾ ಸಚಿನ್ ದಾಖಲೆಯನ್ನು ಉಡೀಸ್ ಮಾಡುವ ಸಾಧ್ಯತೆಯಿದೆ.ಏಕದಿನ ಕ್ರಿಕೆಟ್ ನಲ್ಲಿ 13 ಸಾವಿರ ರನ್ ಗಳಿಸಿದ ಆಟಗಾರ ಎನಿಸಿಕೊಂಡು ಸಚಿನ್ ಸಾಲಿಗೆ ಸೇರಲಿದ್ದಾರೆ