ಕೊಲೊಂಬೊ: ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ ಫೈನಲ್ ಪಂದ್ಯ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಧ್ಯಮಗೋಷ್ಠಿಯಲ್ಲಿ ನೀಡಿದ ಹೇಳಿಕೆ ಈಗ ವೈರಲ್ ಆಗಿದೆ.ಏಷ್ಯಾ ಕಪ್ ಗೆದ್ದ ಬಳಿಕ ಕೊಲೊಂಬೊ ಮೈದಾನದಲ್ಲಿ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಲು ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಮಾಧ್ಯಮಗೋಷ್ಠಿಯ ನಡುವೆಯೂ ಸುಡುಮದ್ದಿನ ಪ್ರದರ್ಶನ ಮುಂದುವರಿದಿತ್ತು. ಇದರಿಂದ ರೋಹಿತ್ ಶರ್ಮಾಗೆ ಮಾತನಾಡಲು ಕಷ್ಟವಾಗಿತ್ತು.ಹೀಗಾಗಿ ತಮ್ಮ ಎಂದಿನ ಶೈಲಿಯಲ್ಲಿ ಕ್ಷಣ ಹೊತ್ತು ಮಾತು ನಿಲ್ಲಿಸಿದ ರೋಹಿತ್,