ಹೋಗಲೋ ಎಂದ ರೋಹಿತ್ ಶರ್ಮಾ, ಮುಖ ಮುಚ್ಚಿಕೊಂಡ ರಿಷಬ್ ಪಂತ್!

ನವದೆಹಲಿ| Krishnaveni K| Last Modified ಸೋಮವಾರ, 4 ನವೆಂಬರ್ 2019 (09:29 IST)
ನವದೆಹಲಿ: ಡಿಆರ್ ಎಸ್ ವಿಚಾರದಲ್ಲಿ ಎಲ್ಲರೂ ಧೋನಿ ಆಗಲು ಸಾಧ‍್ಯವಿಲ್ಲ ಎನ್ನುವುದು ನಿನ್ನೆ ಬಾಂಗ್ಲಾದೇಶ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಅರಿವಾಗಿರಬೇಕು.

 
ಇದು ನಡೆದಿದ್ದ ಬಾಂಗ್ಲಾ ಬ್ಯಾಟಿಂಗ್ ವೇಳೆ. ಆಗ ಕ್ರೀಸ್ ನಲ್ಲಿ ಸೌಮ್ಯ ಸರ್ಕಾರ್ ಇದ್ದರು. 10 ನೇ ಓವರ್ ನಲ್ಲಿ ಸೌಮ್ಯ ಸರ್ಕಾರ್ ವಿರುದ್ಧ ರಿಷಬ್ ಔಟ್ ಗೆ ಮನವಿ ಮಾಡಿದರು. ಆದರೆ ಅಂಪಾಯರ್ ಪುರಸ್ಕರಿಸಲಿಲ್ಲ. ಹೀಗಾಗಿ ರೋಹಿತ್ ಶರ್ಮಾಗೆ ಡಿಆರ್ ಎಸ್ ತೆಗೆದುಕೊಳ್ಳಲು ಬಲವಂತ ಮಾಡಿದರು.
 
ಅದರಂತೆ ರೋಹಿತ್ ರಿಷಬ್ ಒತ್ತಡಕ್ಕೆ ಮಣಿದು ಡಿಆರ್ ಎಸ್ ತೆಗೆದುಕೊಂಡರು. ಆದರೆ ರಿವ್ಯೂನಲ್ಲಿ ಬಾಲ್ ಬ್ಯಾಟ್ ಗೆ ತಾಗಿರಲೇ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಇಂತಹದ್ದೊಂದು ಸಿಲ್ಲಿ ಡಿಆರ್ ಎಸ್ ತೆಗೆದುಕೊಂಡಿದ್ದಕ್ಕೆ ರೋಹಿತ್ ಕೈ ಸನ್ನೆ ಮೂಲಕ ನಗುತ್ತಲೇ ಹೋಗಲೋ ಎನ್ನುವಂತೆ ಲೇವಡಿ ಮಾಡಿದರು. ಅತ್ತ ಅವಮಾನಗೊಂಡ ರಿಷಬ್ ಮುಖ ಮುಚ್ಚಿಕೊಂಡು ತಮ್ಮ ಕೆಲಸಕ್ಕೆ ನಡೆದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಧೋನಿ ಆಗಲು ಸಾಧ್ಯವಿಲ್ಲ ಎಂದು ರಿಷಬ್ ರ ಕಾಲೆಳೆಯುತ್ತಿದ್ದಾರೆ. ಈ ಪಂದ್ಯದ ಸೋಲಿಗೆ ಇದೂ ಒಂದು ಕಾರಣವಾಯಿತು.
ಇದರಲ್ಲಿ ಇನ್ನಷ್ಟು ಓದಿ :