ಅಹಮ್ಮದಾಬಾದ್: ಚಕ್ರವರ್ತಿಯಾಗಲು ಹೊರಟವನು ರಣಾಂಗಣದಲ್ಲಿ ಹೋರಾಡಲೇ ಬೇಕು. ಹೋರಾಟಕ್ಕೆ ಮುನ್ನ ಶಾಂತವಾಗಿ ಕುಳಿತು ಯೋಜನೆ ಹೆಣೆಯಬೇಕು. ಯೋಜನೆಗಳನ್ನು ಅಷ್ಟೇ ಕರಾರುವಾಕ್ ಆಗಿ ಜಾರಿಗೆ ತರಬೇಕು. ಇದಕ್ಕೆಲ್ಲಾ ತಾಳ್ಮೆ ಬೇಕೇ ಬೇಕು.ಸದ್ಯಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಇದೇ ಪರಿಸ್ಥಿತಿಯಲ್ಲಿದ್ದಾರೆ. ಇಡೀ ವಿಶ್ವವೇ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂಬ ಭರವಸೆಯಲ್ಲಿದೆ. ಆ ಭರವಸೆಯನ್ನು ಹೊತ್ತು ಮೈದಾನದಲ್ಲಿ ಪ್ರಬಲ ಪ್ರತಿಸ್ಪರ್ಧಿ ವಿರುದ್ಧ ಆಡುವುದು ಸುಲಭದ ಮಾತಲ್ಲ. ಇದಕ್ಕೆ ಶಾಂತ ಚಿತ್ತ