Widgets Magazine

ಆರಂಭಿಕನಾಗಿ ಕ್ಲಿಕ್ ಆದ ರೋಹಿತ್ ಶರ್ಮಾ: ಇನ್ನು ಕೆಎಲ್ ರಾಹುಲ್ ಗೆ ಟೆಸ್ಟ್ ಪ್ರವೇಶ ಕಷ್ಟ

ವಿಶಾಖಪಟ್ಟಣ| Krishnaveni K| Last Modified ಗುರುವಾರ, 3 ಅಕ್ಟೋಬರ್ 2019 (08:59 IST)
ವಿಶಾಖಪಟ್ಟಣ: ಟೀಂ ಇಂಡಿಯಾದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕನಾಗಿ ರೋಹಿತ್ ಶರ್ಮಾರನ್ನು ಕಣಕ್ಕಿಳಿಸಬೇಕೆಂಬ ಒತ್ತಾಯವನ್ನು ಅವರು ಸರಿಯಾಗಿಯೇ ಸಮರ್ಥಿಸಿಕೊಂಡಿದ್ದಾರೆ.

 
ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಆರಂಭಿಕನಾಗಿ ಕಣಕ್ಕಿಳಿದು ಶತಕ ಬಾರಿಸಿ ರೋಹಿತ್ 115 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಇದರೊಂದಿಗೆ ಆರಂಭಿಕನಾಗಿ ಮೊದಲ ಪಂದ್ಯದಲ್ಲೇ ಕ್ಲಿಕ್ ಆದರು. ಇವರ ಜತೆಗೆ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಕೂಡಾ ನಿನ್ನೆಯ ದಿನದಾಟದಲ್ಲಿ ಅಜೇಯವಾಗಿ 84 ರನ್ ಗಳಿಸಿದ್ದರು. ಭಾರತ ಕೂಡಾ ಮಳೆಯಿಂದಾಗಿ ಬೇಗನೇ ದಿನದಾಟ ಅಂತ್ಯವಾದಾಗ ವಿಕೆಟ್ ನಷ್ಟವಿಲ್ಲದೇ 202 ರನ್ ಗಳಿಸಿತ್ತು.
 
ಆರಂಭಿಕನಾಗಿ ರೋಹಿತ್ ಕ್ಲಿಕ್ ಆಗುವುದರೊಂದಿಗೆ ಇದೀಗ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಗೆ ಟೆಸ್ಟ್ ಪಂದ್ಯಗಳಲ್ಲೂ ಸದ್ಯಕ್ಕೆ ಸ್ಥಾನ ಸಿಗದಂತಾಗಿದೆ. ಫಾರ್ಮ್ ಕಳೆದುಕೊಂಡು ದೇಶೀಯ ಪಂದ್ಯವಾಡುತ್ತಿರುವ ರಾಹುಲ್ ಇನ್ನು, ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗಬೇಕಾದರೆ ಕಠಿಣ ಪರಿಶ್ರಮಪಡಬೇಕಾಗಬಹುದು.
ಇದರಲ್ಲಿ ಇನ್ನಷ್ಟು ಓದಿ :