ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಸೋತರೂ ಟೀಂ ಇಂಡಿಯಾ ಕ್ರಿಕೆಟಿಗರಾದ ಧೋನಿ ಮತ್ತು ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ.ಈ ಪಂದ್ಯದಲ್ಲಿ ಇಬ್ಬರೂ ಆಟಗಾರರೂ 137 ರನ್ ಗಳ ಜತೆಯಾಟವಾಡಿ ಭಾರತದ ಹೀನಾಯ ಸ್ಥಿತಿಯನ್ನು ತಪ್ಪಿಸಿದ್ದರು. ಜತೆಗೆ ವೈಯಕ್ತಿಕವಾಗಿಯೂ ಇಬ್ಬರೂ ಹೊಸ ದಾಖಲೆ ಮಾಡಿದ್ದಾರೆ.22 ನೇ ಏಕದಿನ ಶತಕ ಸಿಡಿಸಿದ ರೋಹಿತ್ ಶರ್ಮಾ ಆ ಮೂಲಕ ಏಕದಿನ ಶತಕಗಳ ಪಟ್ಟಿಯಲ್ಲಿ ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದರು.