ಕಾಲಿಗೆ ಬಿದ್ದ ಅಭಿಮಾನಿ: ಜಾರಿ ಬಿದ್ದ ರೋಹಿತ್ ಶರ್ಮಾ!

ಪುಣೆ, ಭಾನುವಾರ, 13 ಅಕ್ಟೋಬರ್ 2019 (09:16 IST)

ಪುಣೆ: ಕ್ರಿಕೆಟ್ ಪಂದ್ಯವಾಗುವಾಗ  ಅನೇಕ ಬಾರಿ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ದಾಂಧಲೆ ಎಬ್ಬಿಸುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಇದೀಗ ಭಾರತ ಮತ್ತು ದ.ಆಫ್ರಿಕಾ ನಡುವೆ ಪುಣೆಯಲ್ಲಿ ನಡೆಯುತ್ತಿರುವ ಮೈದಾನದಲ್ಲೂ ಇಂತಹದ್ದೇ ಘಟನೆ ನಡೆದಿದೆ.


 
ಭಾರತ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಭದ್ರತಾ ಅಧಿಕಾರಿಯೊಬ್ಬರ ಕಣ್ಣು ತಪ್ಪಿಸಿ ಮೈದಾನಕ್ಕೆ ನುಗ್ಗಿದ  ಅಭಿಮಾನಿ ನೇರವಾಗಿ ರೋಹಿತ್ ಶರ್ಮಾ ಕಾಲಿಗೆ ಬಿದ್ದಿದ್ದಾನೆ. ಈ ವೇಳೆ ಆಯತಪ್ಪಿದ ರೋಹಿತ್ ಶರ್ಮಾ ಅಭಿಮಾನಿಯ ಮೇಲೆ ಬಿದ್ದು ನೆಲಕ್ಕುರುಳಿದ್ದಾರೆ.
 
ಈ ಘಟನೆ ಇದೀಗ ಆಟಗಾರರ ಭದ್ರತೆ ಬಗ್ಗೆ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಆಟಗಾರರಿಗೆ ಮೈದಾನದಲ್ಲಿ ಏನು ಬೇಕಾದರೂ ಆಗಬಹುದು. ಭದ್ರತಾ ಅಧಿಕಾರಿಗಳು ಈ ರೀತಿ ನುಗ್ಗುವ ಜನರತ್ತ ನೋಡದೇ ಮೈದಾನದಲ್ಲಿ ಪಂದ್ಯ ನಡೆಯುವುದನ್ನು ನೋಡುತ್ತಾ ಕುಳಿತರೆ ಈ ರೀತಿಯ ಲೋಪವಾಗುತ್ತದೆ ಎಂದು ಕಿಡಿ ಕಾರಿದ್ದಾರೆ. ಅದೃಷ್ಟವಶಾತ್ ರೋಹಿತ್ ಗೆ ಯಾವುದೇ ಗಾಯವಾಗಿಲ್ಲ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭುಜದ ಗಾಯದ ನಡುವೆಯೂ ಆಡಿ ದ.ಆಫ್ರಿಕಾ ಮಾನ ಕಾಪಾಡಿದ ಕೇಶವ್ ಮಹಾರಾಜ್

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದರೂ ದ.ಆಫ್ರಿಕಾ ಬೌಲರ್ ...

news

ದ.ಆಫ್ರಿಕಾ ವಿರುದ್ಧ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ತೃತೀಯ ದಿನ ಟೀಂ ಇಂಡಿಯಾ ಸ್ಪಿನ್ನರ್ ...

news

ಮತ್ತೊಂದು ಗೆಲುವಿನ ಸನಿಹ ಟೀಂ ಇಂಡಿಯಾ

ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ...

news

ಕೊನೆಗೂ ಕ್ರಿಕೆಟ್ ಮೈದಾನಕ್ಕೆ ಧೋನಿ! ದ.ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್ ಗೆ ಹಾಜರು!

ರಾಂಚಿ: ಇಷ್ಟು ದಿನ ಕ್ರಿಕೆಟ್ ನಿಂದ ಬಿಡುವು ಪಡೆದಿದ್ದ ಕ್ರಿಕೆಟಿಗ ಧೋನಿ ಮತ್ತೆ ಮೈದಾನದಲ್ಲಿ ...