ಐಸಿಸಿ ಶ್ರೇಯಾಂಕದಲ್ಲಿ ಜಾರಿದ ವಿರಾಟ್ ಕೊಹ್ಲಿ, ಏರಿದ ರೋಹಿತ್ ಶರ್ಮಾ

ದುಬೈ| Krishnaveni K| Last Modified ಮಂಗಳವಾರ, 8 ಅಕ್ಟೋಬರ್ 2019 (09:18 IST)
ದುಬೈ: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಶತಕ ಗಳಿಸಿದ್ದ ರೋಹಿತ್ ಶರ್ಮಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.

 
ಒಟ್ಟು 36 ಸ್ಥಾನ ಮೇಲೇರಿರುವ ರೋಹಿತ್ ಶರ್ಮಾ ಇದೀಗ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ 17 ನೇ ಶ್ರೇಯಾಂಕ ಪಡೆದಿದ್ದಾರೆ. ಆದರೆ ದ್ವಿತೀಯ ಶ್ರೇಯಾಂಕದಲ್ಲಿದ್ದ ವಿರಾಟ್ ಕೊಹ್ಲಿ ಅಂಕದಲ್ಲಿ ಕುಸಿತ ಕಂಡಿದೆ.
 
ಕೊಹ್ಲಿ ಅಂಕ ಗಳಿಕೆ 899 ಕ್ಕೆ ಕುಸಿತವಾಗಿದ್ದರೂ ದ್ವಿತೀಯ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಕನ್ನಡಿಗ ಬ್ಯಾಟ್ಸ್ ಮನ್ ಮಯಾಂಕ್ ಅಗರ್ವಾಲ್ 25 ನೇ ಸ್ಥಾನದಲ್ಲಿದ್ದಾರೆ. ದ.ಆಫ್ರಿಕಾ ವಿರುದ್ಧ  ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದ ರವಿಚಂದ್ರನ್ ಅಶ್ವಿನ್ ಟಾಪ್ 10 ರೊಳಗೆ ಕಮ್ ಬ್ಯಾಕ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :