Photo Courtesy: Twitterಅಡಿಲೇಡ್: ಇಂಗ್ಲೆಂಡ್ ವಿರುದ್ಧ ಗುರುವಾರ ನಡೆಯಲಿರುವ ಟಿ20 ವಿಶ್ವಕಪ್ ಸೆಮಿಫೈನಲ್ ಗೆ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಗಾಯವಾಗಿದೆ.ಅಡಿಲೇಡ್ ಓವಲ್ ಮೈದಾನದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಮುಂಗೈಗೆ ಬಾಲ್ ತಗುಲಿ ನೋವಿಗೊಳಗಾಗಿದ್ದರು. ತಕ್ಷಣವೇ ತಂಡದ ಫಿಸಿಯೋ ರೋಹಿತ್ ಗೆ ಚಿಕಿತ್ಸೆ ನೀಡಿದರು.ಬಳಿಕ ಚೇತರಿಸಿಕೊಂಡ ರೋಹಿತ್ ಅಭ್ಯಾಸ ಮುಂದುವರಿಸಿದ್ದಾರೆ. ರೋಹಿತ್ ಗಾಯಗೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೇ ಅಭಿಮಾನಿಗಳು ಆತಂಕಗೊಂಡಿದ್ದರು.