ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡವನ್ನು ಡಿವೈಡ್ ಮಾಡ್ತಿದ್ದಾರೆ! ಇದು ನೆಟ್ಟಿಗರ ಆರೋಪ. ಇದಕ್ಕೆ ಕಾರಣವೂ ಇದೆ.ಟೀಂ ಇಂಡಿಯಾದಿಂದ ಬಿಡುವು ಸಿಕ್ಕಾಗ ಇಬ್ಬರೂ ಕ್ರಿಕೆಟಿಗರು ತಮ್ಮ ಗ್ಯಾಂಗ್ ಕಟ್ಟಿಕೊಂಡು ಸುತ್ತಾಡುತ್ತಾರೆ. ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುತ್ತಾರೆ. ಈ ವೇಳೆ ರೋಹಿತ್ ಜೊತೆ ಅವರ ಮುಂಬೈ ಇಂಡಿಯನ್ಸ್ ಗೆಳೆಯ ಸೂರ್ಯಕುಮಾರ್ ಯಾದವ್ ಮತ್ತು ಇತರರು ಇರುತ್ತಾರೆ. ಅತ್ತ ಕೊಹ್ಲಿ ಜೊತೆಗೆ ಇನ್ನೊಂದಿಷ್ಟು ಗೆಳೆಯ