ವೆಸ್ಟ್ ಇಂಡೀಸ್ ವಿರುದ್ಧ ತವರಿನ ಸರಣಿಗೆ ರೋಹಿತ್ ಶರ್ಮಾಗೆ ಕೊಕ್ ಸಾಧ್ಯಿತೆ
ಮುಂಬೈ, ಬುಧವಾರ, 20 ನವೆಂಬರ್ 2019 (08:57 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಸೀಮಿತ ಓವರ್ ಗಳ ಸರಣಿಯಿಂದ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾರನ್ನು ಹೊರಗಿಡುವ ಸಾಧ್ಯತೆ ಹೆಚ್ಚಿದೆ.
ಸ್ವತಃ ರೋಹಿತ್ ಗೆ ವಿಶ್ರಾಂತಿ ಪಡೆಯಲು ಮನಸ್ಸಿಲ್ಲದೇ ಇದ್ದರೂ ಆಯ್ಕೆಗಾರರು ಹಿಟ್ ಮ್ಯಾನ್ ಗೆ ಕೊಂಚ ವಿಶ್ರಾಂತಿ ನೀಡಲು ಚಿಂತನೆ ನಡೆಸಿದ್ದಾರೆ.
ಇದಕ್ಕೆ ಕಾರಣ ಇದಾದ ಬಳಿಕ ನ್ಯೂಜಿಲೆಂಡ್ ಸರಣಿಗಾಗಿ ಟೀಂ ಇಂಡಿಯಾ ಪ್ರವಾಸ ಮಾಡಬೇಕಿದೆ. ಈ ಪ್ರಮುಖ ಸರಣಿಗೆ ಮೊದಲು ರೋಹಿತ್ ಗೆ ಸಾಕಷ್ಟು ವಿಶ್ರಾಂತಿ ನೀಡುವ ಉದ್ದೇಶದಿಂದ ವಿಂಡೀಸ್ ಸರಣಿಯಿಂದ ಅವರನ್ನು ಹೊರಗಿಡುವ ಸಾಧ್ಯತೆ ಹೆಚ್ಚಿದೆ.
ಇದರಲ್ಲಿ ಇನ್ನಷ್ಟು ಓದಿ :
,
,
,
,
,
,
,