ಲಂಡನ್: ಹಿಟ್ ಮ್ಯಾನ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್ ನ ದಿಗ್ಗಜರೊಬ್ಬಲ್ಲರಾಗಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವೃತ್ತಿ ಬದುಕಿಗೆ 15 ವರ್ಷವಾಗಿದೆ.ಈ ಹಿನ್ನಲೆಯಲ್ಲಿ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣದ ಮೂಲಕ ಪತ್ರ ಬರೆದು ಅಭಿಮಾನಿಗಳಿಗೆ ಭಾವುಕ ಸಂದೇಶ ನೀಡಿದ್ದಾರೆ.‘ಇಂದಿಗೆ ನನ್ನ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ 15 ವರ್ಷಗಳಾಗಿವೆ. ಇದುವರೆಗಿನ ಪ್ರಯಾಣ ಅದ್ಭುತವಾಗಿತ್ತು. ಅದನ್ನು ನಾನು ಜೀವನ ಪೂರ್ತಿ ಮೆಲುಕು ಹಾಕುತ್ತಿರುವೆ. ನನ್ನ ಪಯಣದಲ್ಲಿ ಜೊತೆಯಾದ ಎಲ್ಲರಿಗೂ, ನನ್ನನ್ನು ಒಬ್ಬ