ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯ ಒಂದೂವರೆ ದಿನದಲ್ಲೇ ಮುಗಿದಿತ್ತು. ಈ ಬಗ್ಗೆ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ನೀಡಿದ್ದ ಹೇಳಿಕೆ ವೈರಲ್ ಆಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಪಿಚ್ ಬಗ್ಗೆ ರೋಹಿತ್ ಗೆ ಪ್ರಶ್ನೆ ಕೇಳಲಾಗಿತ್ತು. ಕೇವಲ ಒಂದೂವರೆ ದಿನದಲ್ಲಿ ಟೆಸ್ಟ್ ಪಂದ್ಯ ಮುಕ್ತಾಯವಾಗಿರುವುದರ ಬಗ್ಗೆ ಮತ್ತು ಪಿಚ್ ಕಂಡೀಷನ್ ಬಗ್ಗೆ ರೋಹಿತ್ ಮುಕ್ತವಾಗಿ ಮಾತನಾಡಿದ್ದಾರೆ.ಒಂದು ವೇಳೆ ಭಾರತದಲ್ಲಿ ಸ್ಪಿನ್ ಪಿಚ್ ಮಾಡಿ ಮೊದಲ ದಿನವೇ ಈ ರೀತಿ ತಿರುವು ಪಡೆಯುತ್ತಿದ್ದರೆ ಪಿಚ್ ಸರಿ ಇಲ್ಲ ಎನ್ನುತ್ತಿದ್ದರು.