ಮುಂಬೈ: ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲಿ ಯುವ ಕ್ರಿಕೆಟಿಗರ ಸಾಧನೆಯಿಂದ ಉತ್ಸಾಹಭರಿತರಾಗಿರುವ ಹಂಗಾಮಿ ನಾಯಕ ರೋಹಿತ್ ಶರ್ಮಾ ಹೊಗಳಿಕೆಯ ಮಹಾಪೂರವೇ ಹರಿಸಿದ್ದಾರೆ.ಯುವ ಆಟಗಾರರು ಈ ರೀತಿ ಪೈಪೋಟಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಆಯ್ಕೆಗಾರರಿಗೆ, ನಾಯಕ ವಿರಾಟ್ ಕೊಹ್ಲಿಗೆ ತಂಡದ ಸೆಲೆಕ್ಷನ್ ತಲೆನೋವಾಗುವುದು ಗ್ಯಾರಂಟಿ ಎಂದು ರೋಹಿತ್ ಪಂದ್ಯದ ನಂತರ ಅಭಿಪ್ರಾಯಪಟ್ಟಿದ್ದಾರೆ.ಇದೇ ರೀತಿ ಆಟಗಾರರು ಪ್ರದರ್ಶನ ನೀಡುತ್ತಿದ್ದರೆ, ಯಾರನ್ನು ತೆಗೆದುಕೊಳ್ಳುವುದು, ಯಾರನ್ನು ಬಿಡುವುದು ಎಂಬುದು ಆಯ್ಕೆಗಾರರಿಗೆ ಮತ್ತು ವಿರಾಟ್ ಕೊಹ್ಲಿಗೆ ದೊಡ್ಡ