ದುಬೈ: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಚೆನ್ನೈ ವಿರುದ್ಧದ ಮೊದಲ ಐಪಿಎಲ್ ಪಂದ್ಯದಲ್ಲಿ ಆಡಿರಲಿಲ್ಲ. ಇದಕ್ಕೆ ಕಾರಣವೂ ಕುತೂಹಲಕಾರಿಯಾಗಿದೆ. ರೋಹಿತ್ ಗೆ ಮೊದಲ ಪಂದ್ಯಕ್ಕೆ ಮೊದಲು ಮೊಣಕಾಲಿನ ಕೊಂಚ ನೋವು ಕಾಣಿಸಿಕೊಂಡಿತ್ತು. ಅದೇನೂ ಅಂಥಾ ಗಂಭೀರ ಗಾಯವಾಗಿರಲಿಲ್ಲ. ಆದರೆ ಈಗ ಐಪಿಎಲ್ ನಲ್ಲಿ ಆಡುವುದಕ್ಕಿಂತ ಮುಂದೆ ವಿಶ್ವಕಪ್ ನಲ್ಲಿ ದೇಶವನ್ನು ಪ್ರತಿನಿಧಿಸುವುದೇ ಮುಖ್ಯ ಎಂಬ ಕಾರಣಕ್ಕೆ ಅವರು ರಿಸ್ಕ್ ತೆಗೆದುಕೊಂಡಿರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.ಐಪಿಎಲ್ ಮುಗಿದ ತಕ್ಷಣವೇ