ನ್ಯಾಟಿಂಗ್ ಹ್ಯಾಮ್: ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಪರವಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು, ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.ಮಾಜಿ ನಾಯಕ ಕಪಿಲ್ ದೇವ್ ಸಹಿತ ಅನೇಕ ಮಾಜಿ ಕ್ರಿಕೆಟಿಗರು ಕೊಹ್ಲಿಯನ್ನು ತಂಡದಿಂದ ಹೊರಗಿಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ರೋಹಿತ್ ನಿನ್ನೆಯ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.‘ಕಪಿಲ್ ಹೊರಗಿನಿಂದಷ್ಟೇ ನಮ್ಮನ್ನು ನೋಡುತ್ತಿದ್ದಾರೆ. ಒಳಗೆ ಏನಾಗುತ್ತಿದೆ ಎಂದು ಅವರಿಗೆ ಅರಿವಿಲ್ಲ. ನಮಗೆ ನಮ್ಮದೇ ಆದ ಯೋಜನೆಗಳಿವೆ.