ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದ ಸೂಪರ್ ಓವರ್ ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿದ್ದು ನೋಡಿದರೆ ಅವರನ್ನು ಹಿಟ್ ಮ್ಯಾನ್ ಎಂದು ಕರೆಯುವುದಕ್ಕೂ ಸಾರ್ಥಕವಾಯಿತು ಎನಿಸಬಹುದು.ವಿಶ್ವಕಪ್ ಸೆಮಿಫೈನಲ್ ನಲ್ಲಿ ಇದೇ ನ್ಯೂಜಿಲೆಂಡ್ ವಿರುದ್ಧ ಸೋತಾಗ ಪೆವಿಲಿಯನ್ ನಲ್ಲಿ ಕೂತು ಕಣ್ಣೀರು ಹಾಕಿದ್ದ ರೋಹಿತ್ ಇಂದು ಅದೇ ಕಿವೀಸ್ ನಾಡಿನಲ್ಲಿ ಟಿ20 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ ಮೂಲಕ ಅಂದಿನ ಕಣ್ಣೀರಿಗೆ ಮುಯ್ಯಿ