ಸಿಕ್ಸರ್ ಗಳ ವಿಶ್ವ ದಾಖಲೆ ಮಾಡಿದ ರೋಹಿತ್ ಶರ್ಮಾ

ಲಾಡೆರ್ ಹಿಲ್| Krishnaveni K| Last Modified ಸೋಮವಾರ, 5 ಆಗಸ್ಟ್ 2019 (09:26 IST)
ಲಾಡೆರ್ ಹಿಲ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಿನ್ನೆ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ನೂತನ ವಿಶ್ವ ದಾಖಲೆ ಮಾಡಿದ್ದಾರೆ.

 
51 ಎಸೆತಗಳಲ್ಲಿ 67 ರನ್ ಗಳಿಸಿ ಅಬ್ಬರಿಸಿದ ರೋಹಿತ್ 3 ಸಿಕ್ಸರ್ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ಸಿಕ್ಸರ್ ದಾಖಲೆ ಮಾಡಿದ ವಿಂಡೀಸ್ ನವರೇ ಆದ ಕ್ರಿಸ್ ಗೇಲ್ ದಾಖಲೆ ಮುರಿದರು.
 
ಗೇಲ್ 105 ಸಿಕ್ಸರ್ ಹೊಡೆದಿದ್ದರು. ರೋಹಿತ್ ಈಗ ಅದನ್ನು ಮುರಿದು 107 ಸಿಕ್ಸರ್ ಬಾರಿಸಿದ ಗರಿಮೆ ಹೊಂದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ದಾಖಲೆಯೂ ರೋಹಿತ್ ಹೆಸರಿನಲ್ಲಿದೆ ಎಂಬುದು ವಿಶೇಷ.
ಇದರಲ್ಲಿ ಇನ್ನಷ್ಟು ಓದಿ :