ಬೆಂಗಳೂರು: ಕೈಗೆ ಗಾಯಮಾಡಿಕೊಂಡಿರುವ ರೋಹಿತ್ ಶರ್ಮಾ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮಿಸ್ ಮಾಡಿಕೊಂಡಿದ್ದಾರೆ.ಸದ್ಯಕ್ಕೆ ಅವರೀಗ ಬೆಂಗಳೂರಿನ ಎನ್ ಸಿಎಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ಸಂದರ್ಭವನ್ನು ಅವರು ಕೇವಲ ತಮ್ಮ ಬಗ್ಗೆ ಮಾತ್ರ ಯೋಚಿಸದೇ ಯುವ ಕ್ರಿಕೆಟಿಗರಿಗೆ ಕ್ಲಾಸ್ ಮಾಡುವ ಮೂಲಕ ಸರಿಯಾಗಿಯೇ ಬಳಸಿಕೊಳ್ಳುತ್ತಿದ್ದಾರೆ.ಟೀಂ ಇಂಡಿಯಾದ ಸೀಮಿತ ಓವರ್ ಗಳ ಕ್ಯಾಪ್ಟನ್ ಇದೀಗ ತಾವು ಸುಧಾರಿಸಿಕೊಳ್ಳುವುದರ ಜೊತೆಗೆ ಎನ್ ಸಿಎಯಲ್ಲಿರುವ ಹೊಸ ಪ್ರತಿಭೆಗಳಿಗೆ ಕ್ರಿಕೆಟ್ ಟಿಪ್ಸ್ ನೀಡುತ್ತಿದ್ದಾರೆ.