ವಿಶಾಖಪಟ್ಟಣ: ರೋಹಿತ್ ಶರ್ಮಾ ಹಾಸ್ಯ ಪ್ರವೃತ್ತಿಯುಳ್ಳವರು ಎಂಬುದು ಅವರ ಅಭಿಮಾನಿಗಳಿಗೆಲ್ಲಾ ಗೊತ್ತೇ ಇದೆ. ಅವರು ತಮ್ಮ ಅಭಿಮಾನಿಗಳಿಗೂ ಹಲವು ಬಾರಿ ಚಮಕ್ ನೀಡಿದ್ದಿದೆ.ಇದೀಗ ಅಂತಹದ್ದೇ ಘಟನೆಯೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರೋಹಿತ್ ಟೀಂ ಇಂಡಿಯಾ ಜೊತೆ ವಿಮಾನ ನಿಲ್ದಾಣದಲ್ಲಿ ನಡೆದುಕೊಂಡು ಬರುತ್ತಿರುವ ಅಭಿಮಾನಿಯೊಬ್ಬ ಅವರ ಎದುರಿಗೆ ನಿಂತು ಸೆಲ್ಫೀ ವಿಡಿಯೋ ಮಾಡುತ್ತಿದ್ದ.ಇದನ್ನು ಗಮನಿಸಿದ ರೋಹಿತ್ ಅಭಿಮಾನಿಯ ಬಳಿ ಬಂದು ನನ್ನ ಮದುವೆಯಾಗ್ತೀಯಾ? ಎಂದು ಕಾಲೆಳೆದು ಮುಂದೆ ಸಾಗಿದ್ದಾರೆ.