ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ನಡುವಿನ ಗುದ್ದಾಟದಲ್ಲಿ ಬಡವಾಗುತ್ತಾ ಟೀಂ ಇಂಡಿಯಾ?

ಮುಂಬೈ, ಶನಿವಾರ, 27 ಜುಲೈ 2019 (09:35 IST)

ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ಸೋತ ಬೆನ್ನಲ್ಲೇ ತಂಡ ಒಡೆದ ಮನೆಯಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಇದೆಲ್ಲವೂ ಸುಳ್ಳು ಎಂದು ತೇಪೆ ಹಾಕಲು ಸಾಕಷ್ಟು ಪ್ರಯತ್ನ ನಡೆಯಿತು.


 
ಹಾಗಿದ್ದರೂ ಸತ್ಯ ಯಾವತ್ತೂ ಬೂದಿ ಮುಚ್ಚಿದ ಕೆಂಡದಂತೆ ಎಂಬಂತೆ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಈಗ ಸೋಷಿಯಲ್ ಮೀಡಿಯಾ ಅಂಗಳಕ್ಕೆ ಬಂದು ನಿಂತಿದೆ.
 
 ರೋಹಿತ್ ಶರ್ಮಾ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಯನ್ನು ಇನ್ ಸ್ಟಾಗ್ರಾಂನಲ್ಲಿ ಅನ್ ಫಾಲೋ ಮಾಡಿದ ಬೆನ್ನಲ್ಲೇ ಅನುಷ್ಕಾ ಕೂಡಾ ಪರೋಕ್ಷವಾಗಿ ರೋಹಿತ್ ಗೆ ಟಾಂಗ್ ಕೊಡುವಂತೆ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ. ಇದೆಲ್ಲವೂ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಪುಷ್ಟಿ ನೀಡಿ್ದೆ.
 
ಈ ಬಾರಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ರೋಹಿತ್ ಶರ್ಮಾರನ್ನು ಸೀಮಿತ ಓವರ್ ಗಳ ಪಂದ್ಯಕ್ಕೆ ನಾಯಕನಾಗಿಸುವ ಪ್ರಸ್ತಾಪವಿತ್ತು. ಆದರೆ ಕೊಹ್ಲಿ ವಿಶ್ರಾಂತಿ ನಿರ್ಧಾರದಿಂದ ದಿಡೀರ್ ಹಿಂದೆ ಸರಿದು ನಾಯಕನಾಗಿ ಮುಂದುವರಿದಿದ್ದು, ರೋಹಿತ್ ಅಸಮಾಧಾನದ ಬೆಂಕಿ ಹೆಚ್ಚಿಸಿತೇ ಎಂಬ ಮಾತುಗಳು ಕೇಳಿಬರುತ್ತಿವೆ. ಅಷ್ಟಕ್ಕೂ ಇವರಿಬ್ಬರ ನಡುವಿನ ಮುಸುಕಿನ ಗುದ್ದಾಟಕ್ಕೆ ನಿಜವಾದ ಕಾರಣವೇನೆಂದು ತಿಳಿದುಬಂದಿಲ್ಲ.
 
ಇಬ್ಬರೂ ಟೀಂ ಇಂಡಿಯಾದ ಬೆಸ್ಟ್ ಆಟಗಾರರು. ಆದರೆ ಈ ಗುದ್ದಾಟದಿಂದ ತಂಡಕ್ಕೆ ನಷ್ಟವಾಗದೇ ಇದ್ದರೆ ಸಾಕು ಎಂಬುದೇ ಅಭಿಮಾನಿಗಳ ಪ್ರಾರ್ಥನೆ. ಇಬ್ಬರ ವೈರುಧ್ಯದಿಂದ ತಂಡದಲ್ಲಿ ಒಡಕುಂಟಾದರೆ ಟೀಂ ಇಂಡಿಯಾಕ್ಕೆ ಅತೀ ದೊಡ್ಡ ನಷ್ಟವಾಗಲಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ಬಳಿಕ ಪತ್ನಿ ಅನುಷ್ಕಾ ಶರ್ಮಾ ಮೇಲೂ ಮುನಿಸು ತೋರಿದ ರೋಹಿತ್ ಶರ್ಮಾ?!

ಮುಂಬೈ: ಒಂದೆಡೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಸುದ್ದಿ ...

news

ಸೇನೆಯಲ್ಲಿ ತರಬೇತಿ ಆರಂಭಿಸಿದ ಧೋನಿ: ಕ್ಯಾಪ್ಟನ್ ಕೂಲ್ ಗೆ ಯಾವ ಕೆಲಸ ಗೊತ್ತಾ?

ಬೆಂಗಳೂರು: ಕ್ರಿಕೆಟ್ ಬಿಟ್ಟು ಎರಡು ತಿಂಗಳು ಕಾಲ ಸೇನೆ ಸೇರುವ ನಿರ್ಧಾರ ಮಾಡಿದ್ದ ಕ್ರಿಕೆಟಿಗ ಧೋನಿ ...

news

ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಸಂಬಂಧದ ಬಗ್ಗೆ ಟೀಂ ಇಂಡಿಯಾ ಬೌಲಿಂಗ್ ಕೋಚ್ ಹೇಳಿದ್ದೇನು?

ಮುಂಬೈ: ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಬಳಿಕ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ...

news

ಟೀಂ ಇಂಡಿಯಾಗೆ ಹೊಸ ಪ್ರಾಯೋಜಕತ್ವ: ಬೆಂಗಳೂರು ಮೂಲದ ಸಂಸ್ಥೆಗೆ ಒಲಿದ ಅದೃಷ್ಟ

ಬೆಂಗಳೂರು: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದುವರೆಗೆ ಚೀನಾ ಮೂಲದ ಒಪ್ಪೊ ಮೊಬೈಲ್ ಕಂಪನಿಯ ...