ಟೀಂ ಇಂಡಿಯಾ ಸೋಲಿನ ಬಳಿಕ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ನಡುವೆ ಮಾತು ಬಂದ್?!

v, ಶುಕ್ರವಾರ, 12 ಜುಲೈ 2019 (09:36 IST)

ಲಂಡನ್: ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಆಘಾತದಲ್ಲಿರುವ ಟೀಂ ಇಂಡಿಯಾ ಪಾಳಯದಲ್ಲಿ ಈಗ ಅಸಮಾಧಾನ ಶುರುವಾಗಿದೆಯೇ?


 
ನಾಯಕ ವಿರಾಟ್ ಕೊಹ್ಲಿ ಉಪನಾಯಕ ರೋಹಿತ್ ಶರ್ಮಾ ನಡುವೆ ಮಾತುಕತೆ ಇಲ್ಲವಾಗಿದೆಯೇ? ಇಂತಹದ್ದೊಂದು ಅನುಮಾನವನ್ನು ಆಂಗ್ಲ ಪತ್ರಿಕೆಯೊಂದು ಹೊರಹಾಕಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೆಲವು ಫೋಟೋಗಳನ್ನು ಪ್ರಕಟಿಸಿದ್ದು ಪಂದ್ಯದ ಬಳಿಕ ಎಲ್ಲರನ್ನೂ ಬೆನ್ನುತಟ್ಟಿ ಕೈಕುಲುಕುವ ವಿರಾಟ್, ರೋಹಿತ್ ರನ್ನು ಮಾತ್ರ ಮಾತನಾಡಿಸದೇ ಮುಂದೆ ನಡೆಯುತ್ತಾರೆ.
 
ಇದು ಇಬ್ಬರ ನಡುವೆ ವೈಮನಸ್ಯವೇರ್ಪಟ್ಟಿದೆಯೇ ಎಂಬ ಅನುಮಾನಗಳಿಗೆ ಕಾರಣವಾಗಿದೆ. ಪಂದ್ಯ ಸೋತ ಬಳಿಕ ಎಲ್ಲರಿಗಿಂತ ಹೆಚ್ಚು ದುಃಖಿತರಾದಂತೆ ಕಂಡುಬಂದವರು ರೋಹಿತ್. ಯಾಕೆಂದರೆ ಅವರು ಈ ಟೂರ್ನಿಯಲ್ಲಿ ಅತ್ಯಧಿಕ ರನ್ ಪೇರಿಸಿದ್ದರು. ಆದರೆ ಕೊನೆಯ ಪಂದ್ಯದಲ್ಲಿ ಬೇಗನೇ ಔಟಾಗಿದ್ದು ತಂಡಕ್ಕೆ ದೊಡ್ಡ ನಷ್ಟವಾಗಿತ್ತು. ಇದೇ ಬೇಸರ ಬಹುಶಃ ರೋಹಿತ್ ಗೆ ಕಾಡಿರಬಹುದು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಂದು ಸಚಿನ್ ಅನುಭವಿಸಿದ ಪರಿಸ್ಥಿತಿಯೇ ಈಗ ರೋಹಿತ್ ಶರ್ಮಾಗೂ ಬಂದಿದೆ!

ಲಂಡನ್: 2003 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ರನ್ ಹೊಳೆಯನ್ನೇ ...

news

ವಿಶ್ವಕಪ್ 2019: ಮೊದಲ ಬಾರಿಗೆ ಜಾಗತಿಕ ಕ್ರಿಕೆಟ್ ನ ಚಾಂಪಿಯನ್ ಆಗಲಿರುವ ಇಂಗ್ಲೆಂಡ್-ನ್ಯೂಜಿಲೆಂಡ್!

ಲಂಡನ್: ನಿನ್ನೆ ನಡೆದ ವಿಶ್ವಕಪ್ ಸೆಮಿಫೈನಲ್ 2 ರಲ್ಲಿ ಆಸ್ಟ್ರೇಲಿಯಾವನ್ನು ಅತಿಥೇಯ ಇಂಗ್ಲೆಂಡ್ 8 ವಿಕೆಟ್ ...

news

ಯುವತಿಗೆ ಮೆಸೇಜ್ ಮಾಡಿ ಸಿಕ್ಕಿಬಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ

ನವದೆಹಲಿ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಸುತ್ತ ವಿವಾದದ ಹುತ್ತ ಕರಗುವುದೇ ಇಲ್ಲ ಎನಿಸುತ್ತದೆ. ...

news

ವಿಶ್ವಕಪ್ 2019: ನೋ ಬಾಲ್ ಗೆ ಔಟಾದರೆ ಧೋನಿ? ಆ 42 ನಿಮಿಷಗಳ ಕೆಟ್ಟ ಆಟದಲ್ಲಿ ನಡೆದಿದೆ ಡ್ರಾಮಾ!

ಲಂಡನ್: ವಿಶ್ವಕಪ್ 2019 ರಲ್ಲಿ ಚಾಂಪಿಯನ್ ಆಗುವ ಕನಸು ಹೊತ್ತು ಟೂರ್ನಮೆಂಟ್ ಆರಂಭಿಸಿದ್ದ ಭಾರತ ಸೆಮಿಫೈನಲ್ ...