ದುಬೈ: ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಕ್ರಿಕೆಟ್ ನ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶೇಷ ಚೇತನ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ.ಶ್ರೀಲಂಕಾ ತಂಡದ ಸಮರ್ಥಕ ಸೇನನಾಯಕೆ ರೋಹಿತ್, ಕೊಹ್ಲಿಯ ಅಪ್ಪಟ ಅಭಿಮಾನಿ. ಈ ಹಿಂದೆಯೂ ಸೇನನಾಯಕೆ ಭಾರತೀಯ ಕ್ರಿಕೆಟಿಗರನ್ನು ಭೇಟಿ ಮಾಡಿದ್ದರು.ಇದೀಗ ಏಷ್ಯಾ ಕಪ್ ವೀಕ್ಷಿಸಲು ದುಬೈಗೆ ಬಂದಿರುವ ಸೇನನಾಯಕೆ ಮತ್ತೆ ರೋಹಿತ್ ಮತ್ತು ಕೊಹ್ಲಿಯನ್ನು ಭೇಟಿ ಮಾಡಿದ್ದಾರೆ.