ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಪತ್ನಿಯ ಸೋಷಿಯಲ್ ಮೀಡಿಯಾ ತಮಾಷೆಯ ಮಾತುಕತೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.ನಾಳೆಯಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸಿದ್ಧತೆ ನಡೆಸುತ್ತಿರುವ ಫೋಟೋಗಳನ್ನು ರೋಹಿತ್ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು.ಇದಕ್ಕೆ ಪ್ರತಿಕ್ರಿಯಿಸಿರುವ ರಿತಿಕಾ ‘ಮ್ಯಾಚ್ ಎಲ್ಲಾ ಇರ್ಲಿ. ಮೊದಲು ನಂಗೆ ವಾಪಸ್ ಕಾಲ್ ಮಾಡು’ ಎಂದು ಟ್ರೋಲ್ ಮಾಡಿದ್ದಾರೆ. ಇವರಿಬ್ಬರ ಈ ಸಂಭಾಷಣೆ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದೆ.