ನವದೆಹಲಿ: ಜಗತ್ತಿನ ಶ್ರೀಮಂತ ಕ್ರಿಕೆಟಿಗರಲ್ಲೊಬ್ಬರಾದ ವಿರಾಟ್ ಕೊಹ್ಲಿ ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತದ ಸಂತ್ರಸ್ತರ ನೆರವಿಗೆ 30 ಕೋಟಿ ರೂ. ದೇಣಿಗೆ ನೀಡುತ್ತಾರಂತೆ! ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಕೊಹ್ಲಿ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಘಟನೆ ನನಗೆ ಆಘಾತ ತಂದಿದೆ ಎಂದಿದ್ದರು. ಇದರ ಬೆನ್ನಲ್ಲೇ ಕೊಹ್ಲಿ 30 ಕೋಟಿ ದೇಣಿಗೆ ನೀಡುತ್ತಾರೆ ಎಂಬ ಸುದ್ದಿ ಹರಿದಾಡಿದೆ.ಆದರೆ ಇದು ಅಸಲಿ ಸುದ್ದಿಯಲ್ಲ.