ಮುಂಬೈ: ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಮತ್ತು ಬಿಸಿಸಿಐ ಸಲಹಾ ಸಮಿತಿ ಸದಸ್ಯರಾಗಿರುವ ಮಾಜಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಸ್ಥಾನಕ್ಕೆ ಇದೀಗ ಕುತ್ತು ಬಂದಿದೆ.ಈ ಮೂವರನ್ನೂ ಬಿಸಿಸಿಐ ಸಲಹಾ ಸಮಿತಿಯಿಂದ ವಜಾಗೊಳಿಸಲು ಚಿಂತನೆ ನಡೆದಿದೆ ಎಂದು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ.ಇದಕ್ಕೆ ಕಾರಣ, ಮೂವರೂ ಬಿಸಿಸಿಐ ಸಲಹಾ ಸಮಿತಿ ಅಲ್ಲದೆ, ಬೇರೆ ಲಾಭದಾಯಕ ಹುದ್ದೆಯಲ್ಲಿದ್ದಾರೆ ಎನ್ನುವುದಾಗಿದೆ. ಗಂಗೂಲಿ ಕೋಲ್ಕೊತ್ತಾ ಕ್ರಿಕೆಟ್