Photo Courtesy: Twitterವಾರಣಾಸಿ: ಪ್ರಧಾನಿ ಮೋದಿ ಸಂಸದರಾಗಿರುವ ವಾರಣಾಸಿಯಲ್ಲಿ ಬೃಹತ್ ಕ್ರಿಕೆಟ್ ಕ್ರೀಡಾಂಗಣವೊಂದನ್ನು ನಿರ್ಮಿಸಲು ಇಂದು ಶಂಕು ಸ್ಥಾಪನೆ ಕಾರ್ಯಕ್ರಮ ನೆರವೇರಿಸಲಾಗಿದೆ.ಉತ್ತರ ಪ್ರದೇಶ ಸರ್ಕಾರ ಮತ್ತು ಬಿಸಿಸಿಐ ಸಹಯೋಗದಲ್ಲಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತದೆ. ಈ ಕ್ರೀಡಾಂಗಣ ಭಗವಾನ್ ಶಿವನಿಂದ ಪ್ರೇರಿತವಾಗಿದ್ದು, ಅರ್ಧಚಂದ್ರಾಕೃತಿಯ ಛಾವಣಿ, ತ್ರಿಶೂಲದ ಆಕಾರದ ಫ್ಲಡ್ ಲೈಟ್ ಗಳನ್ನು ಒಳಗೊಳ್ಳಲಿದೆ. 2025 ರ ಡಿಸೆಂಬರ್ ಒಳಗಾಗಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಪೂರ್ತಿಯಾಗುವ ಯೋಜನೆ