ಮುಂಬೈ: ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮಾಡಿರುವ ಟ್ವೀಟ್ ಇದೀಗ ಭಾರತೀಯ ಕ್ರಿಕೆಟಿಗರನ್ನು ಕೆರಳಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ನಂತರ ಇದೀಗ ಕ್ರಿಕೆಟ್ ದಿಗ್ಗಜ ಸಚಿನ್ ಕೂಡಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.ಭಾರತದ ಸ್ವಾಧೀನದಲ್ಲಿರುವ ಕಾಶ್ಮೀರದಲ್ಲಿ ರಕ್ತಪಾತವಾಗುತ್ತಿದೆ. ಯಾಕೆ ವಿಶ್ವಸಂಸ್ಥೆ ಅಮಾಯಕರ ಪ್ರಾಣ ಹೋಗುತ್ತಿದ್ದರೂ ಸುಮ್ಮನಿದೆ ಎಂದು ಅಫ್ರಿದಿ ಟ್ವೀಟ್ ಮಾಡಿದ್ದರು. ಇದಕ್ಕೆ ಕೊಹ್ಲಿ ತಲೆ ಬುಡವಿಲ್ಲದೇ ಮಾತನಾಡಬೇಡಿ ಎಂದು ಹುಕುಂ ಹೊರಡಿಸಿದ್ದರು.ಇದೀಗ